ಯಶಸ್ವಿಯಾಗಿ ನೆರವೇರಿದ ರಾಜ್ಯ ಮಟ್ಟದ 45ನೇ ಹಿರಿಯರ ಕ್ರೀಡಾಕೂಟ

ರಾಜ್ಯ ಮಟ್ಟದ 45ನೇ ಹಿರಿಯರ ಕ್ರೀಡಾಕೂಟವು ಬಳ್ಳಾರಿಯಲ್ಲಿ ವಿಜೃಂಭಣೆಯಿಂದ ಯಶಸ್ವಿಯಾಗಿ ನೆರವೇರಿತು.

ವೆಟರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕ,
ಬಳ್ಳಾರಿ ಜಿಲ್ಲಾ ವೆಟರನ್ಸ್ ಅಥ್ಲೆಟಿಕ್ ಅಂಡ್ ಕಲ್ಚರಲ್ ಅಸೋಸಿಯೇಷನ್,
ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಳ್ಳಾರಿ

ಇವರ ಸಂಯುಕ್ತ ಆಶ್ರಯದಲ್ಲಿ ಈ ಕ್ರೀಡಾಕೂಟವು ನವೆಂಬರ್ ತಿಂಗಳಲ್ಲಿ
ಬಳ್ಳಾರಿ ಕೌಲ್‌ಬಜಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.

ರಾಜ್ಯದ ವಿವಿಧೆಡೆಯ ಹಿರಿಯ ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ
ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದರು.

ಬಳ್ಳಾರಿ ಕ್ರೀಡಾಪಟುಗಳ ತಂಡ

ಈ ಸ್ಪರ್ಧೆಯಲ್ಲಿ ಬಳ್ಳಾರಿಯ ಅನೇಕ ಕ್ರೀಡಾಪಟುಗಳು ತಮಗೆ ಹೊಂದಿರುವ ಶ್ರೇಷ್ಠ ಪ್ರತಿಭೆಯನ್ನು ಪ್ರದರ್ಶಿಸಿ
ಎಲ್ಲರ ಮೆಚ್ಚುಗೆಯನ್ನು ಗಳಿಸಿದರು.

ಈ ಕಾರ್ಯಕ್ರಮದ ಯಶಸ್ಸಿಗೆ ರಾಜ್ಯ ಮತ್ತು ಜಿಲ್ಲಾ ಸಮಿತಿಯ ಎಲ್ಲ ಪದಾಧಿಕಾರಿಗಳು,
ಶ್ರೀಯುತ ವೇಣುಗೋಪಾಲ್ ವಿ (ಚೇರ್ಮನ್), ಶ್ರೀಮತಿ ಸಾವಿತ್ರಿ (ಅಧ್ಯಕ್ಷರು)
ಮುಖ್ಯ ಪಾತ್ರವಹಿಸಿದರು.
ಹಾಗೆಯೇ
ಬಳ್ಳಾರಿ ಜಿಲ್ಲಾ ವೆಟರನ್ಸ್ ಅಥ್ಲೆಟಿಕ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷರಾದ
ಶ್ರೀಮತಿ ಶಾಂತಾಬಾಯಿ ಅವರ ತಂಡವು ಸಮಗ್ರ ಕಾರ್ಯಕ್ರಮವನ್ನು
ಸುಸೂತ್ರವಾಗಿ ಮತ್ತು ಶಿಸ್ತಿನಿಂದ ಆಯೋಜಿಸಿ ಎಲ್ಲರಿಂದ ಪ್ರಶಂಸೆಗೆ ಪಾತ್ರವಾಯಿತು.

Leave a Comment

Your email address will not be published. Required fields are marked *

Scroll to Top