ಬಾಂಗ್ಲಾದೇಶದಲ್ಲಿ ಭೀಕರ ದುರಂತ: ಫೆರಿಯಿಂದ ನದಿಗೆ ಬಿದ್ದ ಬಸ್ – ಕನಿಷ್ಠ 23 ಮಂದಿ ಮೃತರು

ಬಾಂಗ್ಲಾದೇಶದ ರಾಜಬಾರಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರಯಾಣಿಕರ ಬಸ್ ಒಂದು ಫೆರಿಯಿಂದ ನದಿಗೆ ಬಿದ್ದಿದ್ದು, ಕನಿಷ್ಠ 23 ಮಂದಿ ಸಾವನ್ನಪ್ಪಿದ್ದಾರೆ.

ಈ ಘಟನೆ ದೌಲತ್ದಿಯಾ ಫೆರ್ರಿ ಟರ್ಮಿನಲ್ ಬಳಿ ಸಂಭವಿಸಿದೆ. ಸುಮಾರು 40–50 ಪ್ರಯಾಣಿಕರನ್ನು ಹೊತ್ತಿದ್ದ ಬಸ್ ಫೆರಿಗೆ ಏರುವಾಗ ನಿಯಂತ್ರಣ ತಪ್ಪಿ ಪದ್ಮಾ ನದಿಗೆ ಉರುಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ತೀವ್ರತೆಯಿಂದ ಬಸ್ ನದಿಯಲ್ಲಿ ಸುಮಾರು 30 ಅಡಿ ಆಳಕ್ಕೆ ಮುಳುಗಿದ್ದು, ಹಲವರು ಅದರೊಳಗೆ ಸಿಲುಕಿಕೊಂಡಿದ್ದಾರೆ.

ಕೆಲವರು ಈಜಿಕೊಂಡು ಪಾರಾದರೂ, ಬಹುತೇಕ ಪ್ರಯಾಣಿಕರು ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಅಗ್ನಿಶಾಮಕ ದಳ, ನೌಕಾಪಡೆ, ಪೊಲೀಸರು ಮತ್ತು ಡೈವರ್‌ಗಳು ಸೇರಿ ದೊಡ್ಡ ಮಟ್ಟದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನೀರಿನ ಹರಿವು ಮತ್ತು ಹವಾಮಾನ ಸಮಸ್ಯೆಯಿಂದ ರಕ್ಷಣಾ ಕಾರ್ಯ ವಿಳಂಬವಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಫೆರಿಗೆ ಏರುವ ವೇಳೆ ಮತ್ತೊಂದು ನೌಕೆ ಪಾಂಟೂನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಈ ಘಟನೆ ಬಾಂಗ್ಲಾದೇಶದಲ್ಲಿ ಸಾರಿಗೆ ಸುರಕ್ಷತೆ, ವಿಶೇಷವಾಗಿ ಫೆರ್ರಿ ವ್ಯವಸ್ಥೆಯ ಭದ್ರತೆ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

Leave a Comment

Your email address will not be published. Required fields are marked *

Scroll to Top