ಹೈಟೆಕ್ 2 ನ್ಯಾನೋಮೀಟರ್ ಚಿಪ್ ಅನಾವರಣಗೊಳಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಬೆಂಗಳೂರು:
ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ
ಅಶ್ವಿನಿ ವೈಷ್ಣವ್ ಅವರು,
Qualcomm ಕಂಪನಿ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ 2 ನ್ಯಾನೋಮೀಟರ್ (2nm) ಚಿಪ್ ಅನ್ನು ಶನಿವಾರ ಅನಾವರಣಗೊಳಿಸಿದರು.

ಈ ಚಿಪ್ ಅತ್ಯಂತ ಸುಧಾರಿತ ಸೆಮಿಕಂಡಕ್ಟರ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಸಿಪಿಯು (CPU) ಮತ್ತು ಜಿಪಿಯು (GPU) ಸಂಯೋಜಿತ ವಿನ್ಯಾಸವನ್ನು ಹೊಂದಿದೆ. ಒಂದೇ ಚಿಪ್‌ನಲ್ಲಿ ಸುಮಾರು 20 ರಿಂದ 30 ಬಿಲಿಯನ್ ಟ್ರಾನ್ಸಿಸ್ಟರ್‌ಗಳು ಅಳವಡಿಸಲಾಗಿದ್ದು, ಹೆಚ್ಚಿನ ಕಾರ್ಯಕ್ಷಮತೆ ಮತ್ತು ಕಡಿಮೆ ವಿದ್ಯುತ್ ಬಳಕೆಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಈ 2 ನ್ಯಾನೋಮೀಟರ್ ಚಿಪ್‌ಗಳನ್ನು ಕಂಪ್ಯೂಟರ್‌ಗಳು, ಕ್ಯಾಮರಾಗಳು, ವೈ-ಫೈ ರೂಟರ್‌ಗಳು, ವಿಮಾನಗಳು, ವಾಹನಗಳು ಸೇರಿದಂತೆ ವಿವಿಧ ಉನ್ನತ ತಂತ್ರಜ್ಞಾನ ಉಪಕರಣಗಳಲ್ಲಿ ಬಳಸಬಹುದು. ಇದಲ್ಲದೆ, ಈ ಚಿಪ್‌ಗಳು ಕೃತಕ ಬುದ್ಧಿಮತ್ತೆ (AI) ಆಧಾರಿತ ಅನ್ವಯಿಕೆಗಳಿಗೆ ಸಹ ಬೆಂಬಲ ನೀಡಲಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್,
ಸುಧಾರಿತ ಸೆಮಿಕಂಡಕ್ಟರ್ ವಿನ್ಯಾಸ ಕ್ಷೇತ್ರದಲ್ಲಿ ಭಾರತ ಇದೀಗ ಜಾಗತಿಕ ಮಟ್ಟದಲ್ಲಿ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳುತ್ತಿದೆ ಎಂದು ಹೇಳಿದರು. ಕ್ವಾಲ್‌ಕಾಮ್ ಕಂಪನಿಯ ಈ ಸಾಧನೆ, ಭಾರತದ ವಿನ್ಯಾಸ ಪರಿಸರ ವ್ಯವಸ್ಥೆ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮುಂದಿನ ಪೀಳಿಗೆಯ ವೈರ್‌ಲೆಸ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಉನ್ನತ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ 2 ನ್ಯಾನೋಮೀಟರ್ ಚಿಪ್‌ಗಳು ಕ್ರಾಂತಿಕಾರಿ ಬದಲಾವಣೆ ತರಲಿವೆ ಎಂದು ತಿಳಿಸಿದ ಅವರು,
ಭಾರತವು ಇನ್ನು ಮುಂದೆ ಕೇವಲ ಚಿಪ್ ಬಳಸುವ ದೇಶವಾಗದೆ, ಚಿಪ್ ವಿನ್ಯಾಸದಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.

Leave a Comment

Your email address will not be published. Required fields are marked *

Scroll to Top