ಕರ್ನಾಟಕ ಸರ್ಕಾರ ಮಂಡಿಸಿದ ‘Hate Speech ಮತ್ತು Hate Crimes (Prevention) Bill – 2025’ ಇದೀಗ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ದ್ವೇಷ ಭಾಷಣ, ಧಾರ್ಮಿಕ ಭೇದಭಾವ ಉಂಟುಮಾಡುವ ಹೇಳಿಕೆಗಳು, ಮುಸುಗುಳಿಸಿ ಸಾಮಾಜಿಕ ಒಗ್ಗಟ್ಟಿಗೆ ಧಕ್ಕೆ ತರುವ ಪೋಸ್ಟ್ಗಳು — ಇವೆಲ್ಲವನ್ನು ಕಾನೂನುಬದ್ಧವಾಗಿ ತಡೆಗಟ್ಟುವ ಗುರಿ ಈ ಬಿಲ್ಗೆ ಇದೆ.

ಕಾಯ್ದೆಯ ಪ್ರಮುಖ ಅಂಶಗಳು:
- ಸೋಶಿಯಲ್ ಮೀಡಿಯಾದಲ್ಲಿ ಸಮುದಾಯದ ವಿರುದ್ಧ ದ್ವೇಷ ಹರಡುವುದಕ್ಕೆ 3 ವರ್ಷ ಜೈಲು ಶಿಕ್ಷೆ
- ಅರಾಜಕತೆ ಉಂಟುಮಾಡುವ ವಿಡಿಯೋ/ಪೋಸ್ಟ್ ಹಂಚಿದರೆ ಜಾಮೀನು ನಿರಾಕರಣೆ
- ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗೆ ಕಡ್ಡಾಯ ಸಹಕಾರ
ಬಿಜೆಪಿ ವಿರೋಧ:
ಬಿಜೆಪಿ ಈ ಬಿಲ್ನ್ನು “ಜನರ ಮಾತು ಹೇಳುವ ಹಕ್ಕನ್ನು ಕಟ್ಟಿಹಾಕುವ ಯತ್ನ” ಎಂದು ಟೀಕಿಸಿ, ಹೈಕೋರ್ಟ್ಗೆ ತೆರಳುವುದಾಗಿ ಘೋಷಿಸಿದೆ.
ಇನ್ನು ಸರ್ಕಾರ “ಶಾಂತಿ–ಸೌಹಾರ್ಧ ಕಾಪಾಡಲು ಇದು ಅವಶ್ಯಕ” ಎಂದು ಹೇಳಿದೆ.